Sunday 23 March 2014

> ಬಾಳ ದಾರಿ.....



ಮೂಲ ರಾಗದ ಹಾಡು : ಬಾನಿಗೊಂದು ಎಲ್ಲೆ ಎಲ್ಲಿದೆ....





ಬಾಳಿಗೊಂದು ದಾರಿ ಎಲ್ಲಿದೆ....  ನಿನ್ನಲ್ಲೇ ನಕ್ಷೆ ಅಡಗಿದೆ...
ಆಲಸಿಯು ಏಕಾಗುವೆ...  ಮುಂದಡಿಯಿಡು ಅಡಿಯಿಡು...

ಬಾಳಿಗೊಂದು ದಾರಿ ಎಲ್ಲಿದೆ....  ನಿನ್ನಲ್ಲೇ ನಕ್ಷೆ ಅಡಗಿದೆ...
ಆಲಸಿಯು ಏಕಾಗುವೆ...  ಮುಂದಡಿಯಿಡು ಅಡಿಯಿಡು...
ಬಾಳಿಗೊಂದು ದಾರಿ ಎಲ್ಲಿದೆ.... 

ಬಾಳಿನಲ್ಲಿ ಎಂದೂ ನೀನು ದುಃಖ ಪಡದಿರು...
ದುಃಖದಿಂದ  ಬಾಳಿನಲ್ಲಿ ಏನೂ ನಡೆಯದು...
ಕಷ್ಟ ಮರೆತು ದಿನವೂ ನೀನು ಮುಂದೆ ನುಗ್ಗಿರು...
ಆಗ ಮಾತ್ರ ಜೀವನದಿ ಗೆಲುವು ಸಿಗುವುದು...
ಅದೇನೇ ಆದರೂ.. ಎದುರೇನೆ ಬಂದರೂ...
ಧೈರ್ಯದಿಂದಲಿ... ಮುಂದೆ ಸಾಗು ನೀ..

ಬಾಳಿಗೊಂದು ದಾರಿ ಎಲ್ಲಿದೆ....  ನಿನ್ನಲ್ಲೇ ನಕ್ಷೆ ಅಡಗಿದೆ...
ಆಲಸಿಯು ಏಕಾಗುವೆ...  ಮುಂದಡಿಯಿಡು ಅಡಿಯಿಡು...

ದುಡಿಯಬೇಕು ನಿನ್ನ ಬಾಳ ಬಂಡಿ ಸಾಗಲು
ದುಡಿಯುವಾಗ ನೆಮ್ಮದಿ ಇರಲಿ ಮನದೊಳು
ಕಷ್ಟ ಸುಖವು ಬದುಕಿನಲ್ಲಿ ಎರಡು ಮುಖಗಳು
ಬರೀ ಸುಖವು ಯಾರಿಗೂ ಇಲ್ಲ ಜಗದೊಳು
ಕಷ್ಟ ಬಂದರೂ...  ಎದ್ದು ನಿಲ್ಲು ನೀ...
ಏನೇ ಆದರೂ.. ಬಾಳ ಬಂಡಿ ಸಾಗಲಿ....

ಬಾಳಿಗೊಂದು ದಾರಿ ಎಲ್ಲಿದೆ....  ನಿನ್ನಲ್ಲೇ ನಕ್ಷೆ ಅಡಗಿದೆ...
ಆಲಸಿಯು ಏಕಾಗುವೆ...  ಮುಂದಡಿಯಿಡು ಅಡಿಯಿಡು...


ಯೌವ್ವನದಿ  ದಾರಿ ತಪ್ಪಿ ನೀನು ನಡೆದರೆ....
ಮುಂದೆ ಬಾಳಿನಲ್ಲಿ ನಿನಗೆ ಇಹುದು ತೊಂದರೆ...
ಬರೀ ಸುಖವು ಸಿಗದು ನಿನಗೆ ಎಂದೂ ಬಾಳಲಿ...
ಎಲ್ಲರಿಗೂ ಕಷ್ಟ-ಸುಖವು ಸಮದ ಪಾಲಲಿ
ಕಲ್ಲು ಮುಳ್ಳಿದು.. ಬಾಳ ದಾರಿಯು...
ಮುಂದೆ ನಡೆದರೆ...  ಸುಖವು ಬಾಳಲಿ...

ಬಾಳಿಗೊಂದು ದಾರಿ ಎಲ್ಲಿದೆ....  ನಿನ್ನಲ್ಲೇ ನಕ್ಷೆ ಅಡಗಿದೆ...
ಆಲಸಿಯು ಏಕಾಗುವೆ...  ಮುಂದಡಿಯಿಡು ಅಡಿಯಿಡು...

ಇಗ ನೀನು ಯೌವ್ವನದಿ ಕಷ್ಟಪಟ್ಟರೆ..
ಮುಂದೆ ನಿನಗೆ ಇರುವುದು ಸುಖದ ಆಸರೆ..
ದೇವರನ್ನು ನಂಬಿ ಒಳ್ಳೆ ದಾರಿ ಹಿಡಿದರೆ..
ಬರದು ನಿನಗೆ ಎಂದಿಗೂ ಬಹಳ ತೊಂದರೆ..
ಒಮ್ಮೆ ಸೋತರೂ... ಮತ್ತೆ ಅಡಿಯಿಡು..
ನುಗ್ಗಿ ನಡೆದರೆ.. ಗೆಲುವು ನಿನ್ನದು..

ಬಾಳಿಗೊಂದು ದಾರಿ ಎಲ್ಲಿದೆ....  ನಿನ್ನಲ್ಲೇ ನಕ್ಷೆ ಅಡಗಿದೆ...
ಆಲಸಿಯು ಏಕಾಗುವೆ...  ಮುಂದಡಿಯಿಡು ಅಡಿಯಿಡು...
ಮುಂದಡಿಯಿಡು ಅಡಿಯಿಡು...   ಮುಂದಡಿಯಿಡು ಅಡಿಯಿಡು.....

ಇಂತಿ,
ನಾಗೇಶ್.. :)

Monday 17 March 2014

> ಚುನಾವಣೆ....

ಸೇರಿದರೆ ರಾಜಕಾರಣ
ಮಾಡಬಹುದು ಬೇಕಾದಷ್ಟು ಹಣ
ಅದಕಾಗಿ ಚುನಾವಣೆಯಲ್ಲಿ ತೊಡುವರು ಪಣ
ಅದಕಾಗಿ ಖರ್ಚು ಮಾಡುವರು ತಮ್ಮೆಲ್ಲಾ ಹಣ
ಗೆದ್ದರೆ ಕುರ್ಚಿಗೇರುವರು...
ಸೋತರೆ ಬೀದಿಗೆ ಬೀಳುವರು...

ಚುನಾವಣೆಗೆ ಹಂಚುವರು ಹೆಂಡ ಸಾರಾಯಿ
ಅದಕೆ ಮರುಳಾಗುವ ಬಡವ ಬಡಪಾಯಿ
ಮಹಿಳೆಯರಿಗೆ ಹಂಚುವರು ಸೀರೆ ರವಿಕೆ
ಈ ಎಲ್ಲಾ ತಂತ್ರ ಚುನಾವಣೆ ಗೆಲ್ಲೋಕೆ....

ನೀವು ಹಾಕಿದ ಮೇಲೆ ವೋಟು..
ಬೆರಳಿಗೆ ಹಾಕುವರೊಂದು ಡಾಟು....
ಹಾಕಿ ನಿಮ್ಮ ಮತ.. ಸರಿಯಾದ ಅಭ್ಯರ್ಥಿಗೆ...
ಲಂಚ ಕೊಟ್ಟರಂತ.. ಸೋಲಬೇಡಿ ಭ್ರಷ್ಟರಿಗೆ...
 

ರಾಜಕಾರಣವೊಂದು ಚದುರಂಗ
ಭ್ರಷ್ಟರ ಹೆಸರಾಗಬೇಕು ಬಹಿರಂಗ
ತೊಲಗಿದಾಗ ಭ್ರಷ್ಟಾಚಾರದ ಅನಿಷ್ಟ
ದೇಶವಾಗುವುದು ಬಲಿಷ್ಠ....

ಜೈ ಹಿಂದ್ ....

ಇಂತಿ,
ನಾಗೇಶ್ :)

Thursday 13 March 2014

> ಕಲಿಗಾಲ...


ಈ ಲೋಕ ತುಂಬಾ ದೊಡ್ಡದು
ಎಲ್ಲರಿಗೂ ಸಹಾಯ ಮಾಡಲು ನಮಗಾಗದು
ಮಾಡಲು ಹೊರಟರೆ ಲೋಕಸೇವೆ
ಗುಂಡಿ ತೋಡಿಕೊಂಡಂತೆ ನಮಗೆ ನಾವೇ

ಏಕೆಂದರೆ ಇದು ಕಲಿಗಾಲ
ಮೋಸಗಾರರಿಗೆ ಪರ್ವಕಾಲ
ಒಳ್ಳೆಯವರಿಗಿದು ಕಾಲವಲ್ಲ
ನಾವೇನು ತುಂಬಾ...ಒಳ್ಳೆಯವರಲ್ಲ... :P

ಇಂತಿ,
ನಾಗೇಶ್ :)

Friday 7 March 2014

> ಹಿತನುಡಿ - 1



ಸಾಗರದಿ ಸಾಗುವ ಹಡಗಂತೆ ಈ ಜೀವನ
ಆಟ, ಓದಿನಲ್ಲೇ ಕಳೆಯುವುದು ಮುಕ್ಕಾಲು ಯೌವ್ವನ

ಈ ಹಂತದಲಿ ಬೇಕು ಜೀವನಕೆ ಯಶಸ್ಸು
ಅದಕೆ ಮಾಡಬೇಕು ಪರಿಶ್ರಮದ ತಪಸ್ಸು
ಇಲ್ಲಿ ಸಿಕ್ಕರೆ ಯಶಸ್ಸು
ಮುಂದಿನ ಜೀವನ ಸಲೀಸು


ಆಸೆಯೇ ದುಃಖಕ್ಕೆ ಮೂಲವೆಂದ ಬುದ್ಧ
ಈ ನಿಯಮಕೆ ಜೀವನಚಕ್ರ ಬದ್ಧ
ಜೀವನದಲ್ಲಿ ಇರಬಾರದು ಬಹು ನಿರೀಕ್ಷೆ
ಬಹುನಿರೀಕ್ಷೆ ತರಬಹುದು ನಿರಾಸೆ
ಇದಾಗಿರಬಹುದು ಭಗವಂತನ ಪರೀಕ್ಷೆ
ಅದರಲ್ಲಿ ಪಾಸಾಗುವುದು ಸಲೀಸೆ ??

ಯೌವ್ವನದಲ್ಲಿ ಮಾಡಬೇಡ ಮನಸ್ಸಿಗೆ ತೋಚಿದೆಲ್ಲವನ್ನು
ತಲೆಯಲ್ಲಿಟ್ಟುಕೋ ಮುಂದಿನ ಜೀವನವನ್ನು 
ಈಗ ಎಲ್ಲವನು ತೆಗೆದುಕೊಂಡರೆ ಹಗುರ
ಮುಂದೆ ಬದುಕಾಗುವುದು ಭಾರ

ಇರಬೇಕು ಗುರಿ ಮುಟ್ಟುವ ತವಕ
ಗುರಿ ಮುಟ್ಟುವ ತನಕ
ಈ ಹಡಗಿಗೆ ಭಗವಂತನೇ ನಾವಿಕ
ಅವನು ತೋರಿದ ಹಾದಿಯಲ್ಲಿ ನಡೆಯುವುದು ನಮ್ಮ ಕಾಯಕ

ಎದ್ದೇಳಬೇಕು ಯುವ ಪೀಳಿಗೆ 
ದೇಶದ ಮುಂದಿನ ನಾಳೆಗೆ
ಎಲ್ಲರೂ ಪಡೆಯಿರಿ ಜೀವನದಲ್ಲಿ ಏಳಿಗೆ
ಶುಭವಾಗಲಿ ಬಾಳಿಗೆ...

ಇಂತಿ,
ನಾಗೇಶ್ :)

Wednesday 5 March 2014

> ಲೈಫು ಇಷ್ಟೇನೇ ......

         
           ಹುಟ್ಟು ತಂದೆ-ತಾಯಿಯ ವರ. ಜನನ ನೀಡಿದ ಜನಕರನ್ನು ಜೀವನವಿಡೀ ಜೊತೆಗಿದ್ದು  ಜತನದಿಂದ ನೋಡಿಕೊಂಡರೆ ಅವರಿಗೂ ಸಂತೋಷ.. ನಮ್ಮ ಜನ್ಮವೂ ಸಾರ್ಥಕ.. ಹುಟ್ಟಿನಿಂದ ಮೊದಲುಗೊಂಡು ಪ್ರೀತಿ, ಆರೈಕೆ,  ವಿದ್ಯಾಭ್ಯಾಸ,  ಕಾಳಜಿ ಎಲ್ಲವನ್ನು ಧಾರೆಯೆರೆದು, ಮಕ್ಕಳ ಬದುಕಿಗೊಂದು ನೆಲೆಗಾಣಿಸುವ ಪೋಷಕರಿಗೊಂದು ಸಲಾಮ್....  


ನವಮಾಸ ಪೂರೈಸಿದ ಆ ಕ್ಷಣ
ಜಗದ ಬೆಳಕ ಕಾಣುವ ಮಗು
ಬೆಳಕ ಕಂಡ ಆ ಕ್ಷಣ
ಮಗುವಿಗೆ ಬಾರದು ನಗು
ಮೊದಲು ಅಳುವುದಾ ಮಗು
ಆಮೇಲೆ ಬರುವುದು ನಗು
ಪೋಷಕರ ಮೊಗದೊಳಗೂ


ತಂದೆ-ತಾಯಿ ಪ್ರೀತಿ ತೋರಿಸಿ
ಬೆಳೆಸುವರು ಕಾಳಜಿವಹಿಸಿ
ಬಾಲ್ಯದಲಿ ಸೇರುವುದು ಅಂಗನವಾಡಿ
ಅಲ್ಲಿ ಬೆಳೆಯುವುದು ಮಗು ಆಟವಾಡಿ

ಆಗಾಗ ಸಿಗುವ ಬಗೆಬಗೆಯ ತಿನಿಸು
ಅದ ನೋಡಿ ಮುದಗೊಳ್ಳುವುದು ಮಗುವಿನ ಮನಸು
ಆ ಮುದವ ನೋಡುವುದೇ ಸೊಗಸು
ಮಗುವಿನ ಮೇಲಿರುವುದು ತಂದೆ-ತಾಯಿಯ ಕನಸು

ನಂತರ ಶುರು ಪ್ರಾಥಮಿಕ ಶಿಕ್ಷಣ
ಇಲ್ಲಿಂದ ಶುರು ವಿದ್ಯಾಭ್ಯಾಸದ ಆರೋಹಣ
ಒಂದರಿಂದ ಏಳನೇ ತರಗತಿ
ಇದುವೇ ಎಲ್ಲರ ಬಾಳಿಗೆ ತಳಹದಿ




ಪ್ರತಿದಿನ ಮುಂಜಾನೆಯ ಪ್ರಾರ್ಥನೆ
ಟೀಚರ್ ಹೊಡೆದಾಗ ಆಗುವ ಯಾತನೆ
ಸಂಜೆಯ ತನಕ ಪಾಠ.. ಕೊನೆಯ ಅರ್ಧ ಗಂಟೆ ಆಟ

ನಡೆಯುವ ಶಾಲಾ ಚುನಾವಣೆಗಳು
ತರಗತಿಗೆ ಹೋಗಿ ಮಾಡಿದ ಪ್ರಚಾರಗಳು
ಗೆದ್ದವನೇ ಆ ಶಾಲಾ ನಾಯಕ
ಸೋತವನು ವಿರೋಧ ಪಕ್ಷದ ನಾಯಕ
ಮಂತ್ರಿಗಳ ತಪ್ಪನ್ನು ಹುಡುಕುವುದೇ
ವಿರೋಧ ಪಕ್ಷದ ಕಾಯಕ

ಪ್ರಾಥಮಿಕ ಶಿಕ್ಷಣ ಮುಗಿಸಿ
ಪ್ರೌಢಶಾಲೆಗೆ ಕಾಲಿರಿಸಿ
ತಮ್ಮ ಓದನ್ನು ಮುಂದುವರೆಸಿ
ಮುಗಿಸುವರು ಎಸ್.ಎಸ್.ಎಲ್.ಸಿ...

ನಂತರ ಕಾಲೇಜು.. ಆಗೆಲ್ಲ ಟೀನೇಜು
ಬರುವುದು ಕಮ್ಮಿ ಪರ್ಸೇಂಟೆಜು
ಜಗಳದ ಗಾಯಕ್ಕೆ ಹಚ್ಚಿದ ಬ್ಯಾಂಡೇಜು

ಡಿಗ್ರೀ ಕಾಲೇಜಿನ ಡೆಸ್ಕುಗಳಲ್ಲಿ
ಪ್ರೀತಿ ಪ್ರೇಮದ ಬರಹ
ದೂರಾದ ಪ್ರೇಮಿಗಳ ಮನದಲ್ಲಿ
ಪ್ರೀತಿ ಒಡೆದ ವಿರಹ



ಮುಗಿಯುತ್ತಲೇ ತಮ್ಮ ವಿದ್ಯಾಭ್ಯಾಸ
ಜೀವನಕ್ಕೆ ಹುಡುಕಬೇಕೊಂದು ಕೆಲಸ
ಕಾಲೇಜು ಮುಗಿಯುತ್ತಲೇ ಉದ್ಯೋಗ ಸಿಕ್ಕರೆ ಅದೃಷ್ಟ
ಸಿಗದಿದ್ದರೆ ಉದ್ಯೋಗಕ್ಕಾಗಿ ಅಲೆಯುವುದು ಕಷ್ಟ


ಸಿಕ್ಕಿದ ಮೇಲೆ ಉದ್ಯೋಗ
ಗಟ್ಟಿಯಾಗಿ ನೆಲೆ ನಿಲ್ಲಬೇಕು ಬದುಕಲ್ಲಿ
ತಮ್ಮ ಬದುಕಿನಲ್ಲಿ ಆಗಾಗ
ಮೋಜು ಮಾಡುವರು ಗೆಳೆಯರ ಜೊತೆಯಲ್ಲಿ

ಜೀವನದಲ್ಲಿ ನೆಲೆನಿಲ್ಲುತ್ತಲೇ, ಆಗುವರೊಂದು ಮದುವೆ
ಆಮೇಲೆ ಹೇಳುವರು, ಯಾರಿಗೆ ಬೇಕೀ ಗೊಡವೆ..
ಯೌವ್ವನದಲ್ಲಿ ಮದುವೆಯಾಗಲು ಆತುರಪಡುವೆ
ಇದು ವರ್ಷ ವರ್ಷವೂ ಹೆಚ್ಚಾಗುವ ನವೆ
ಎಂದು ಮದುವೆಯ ನಂತರವೇ ತಿಳಿಯುವುದಲ್ಲವೇ

ಸಂಗಾತಿಯಾಗಿ ಸಿಕ್ಕರೆ ಒಳ್ಳೆಯ ಹೆಂಡತಿ
ಚೆನ್ನಾಗಿರುವುದು ಗಂಡನ ಪರಿಸ್ಥಿತಿ
ಆಕೆಯ ಖರ್ಚಿಗಿಲ್ಲದಿದ್ದರೆ ಮಿತಿ
ಆಗುವುದು ಬೇಗನೆ ಪತಿಯ ತಿಥಿ
ಮಾಡುವವಳಾಗಿದ್ದರೆ ಆಕೆ ಮಿತವ್ಯಯ
ಉಳಿಯುವುದು ಗಂಡನ ಆದಾಯ

ಮುಂದೆ ಬರುವುದು ಮನೆ, ಮಕ್ಕಳು
ಮುಂದುವರಿವ ತಾಪತ್ರಯಗಳು
ಕೊಡಿಸಬೇಕು ಮಕ್ಕಳಿಗೆ ವಿದ್ಯಾಭ್ಯಾಸ
ಅವರನ್ನು ಸರಿದಾರಿಗೆ ತರುವುದೇ ಸಾಹಸ

ನಡೆಸಿಕೊಂಡು ಹೋಗುತ್ತಲಿ ಸಂಸಾರ
ಬರುಬರುತ್ತಾ ಜೀವನ ಬಲುಭಾರ
ಮಕ್ಕಳು ಬೆಳೆದು ದೊಡ್ದವರಾಗಲು
ಬಿಳಿಯಾಗುವುದು ಪೋಷಕರ ಕೂದಲು

ವೃದ್ಧಾಪ್ಯದಿ ಎಲ್ಲರೂ ಬಯಸುವರು ಶಾಂತಿ
ಕೆಲವರಿಗೆ ಮಾತ್ರ ಮಕ್ಕಳಿಂದ ನೆಮ್ಮದಿ
ಕೆಲವರಿಗೆ ಮಕ್ಕಳು ದೂರ ಮಾಡಿದ ಬೇಗುದಿ
ಇದೇ ಎಲ್ಲರ ಜೀವನದ ಪರಿಸ್ಥಿತಿ

ಹಿರಿಯರು ಹೇಳಿರುವರು ಆಗಲೇ
ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ
ಬಂದು ಹೋಗುವ ನಡುವೆ ಬದುಕೆಲ್ಲ ಕತ್ತಲೆ
ಜೀವನದಿ ಹೋಗಲಾಡಿಸಿ ಈ ಕತ್ತಲೆ
ಬದುಕಲ್ಲಿ ಏನಾದರೂ ಸಾಧಿಸಿದಾಗಲೇ
ಬದುಕಲ್ಲಿ ಮೂಡುವುದು ಚಿತ್ತಾರದ ಅಲೆ
ಆಗಲೇ ಜೀವನ ಸಾರ್ಥಕ ಕಾಣಲೇ

ಲೈಫುಷ್ಟೇನೆ .......

ಇಂತಿ,
ನಾಗೇಶ್.. :)