Sunday, 27 April 2014

> ಮೂಢನಂಬಿಕೆ...

ಒಳ್ಳೆಯ ಕೆಲಸಕ್ಕೆ ಹೋಗುವಾಗ..
ಖುಷಿಯಿಂದ ಹೊರಟಾಗ...
ಅಡ್ಡ ಬಂದರೆ ಬೆಕ್ಕು
ಹೇಳುವರು ಅಪಶಕುನ...
ಹೇಗೆಯೇ ಎಲ್ಲಾದಕ್ಕೂ
ಹುಡುಕುವರು ಒಂದೊಂದು ಕಾರಣ....

ಮಹಾ ಲೇಖಕ ಗೋವಿಂದ
ಬರೆದ ಪುಸ್ತಕವೊಂದ...
ಮೂಢನಂಬಿಕೆಯ ವಿರೋಧಿಸಿ
ಅದರ ಕಾರಣಗಳ ತಿಳಿಸಿ...
ಪುಸ್ತಕ ಮುದ್ರಣಕೆ ಹೊರಟ ಗೋವಿಂದ
ಅರ್ಧ ದಾರಿಗೆ ವಾಪಾಸು ಬಂದ...
ಕಾರಣ ಏನಾಗಿತ್ತು ?
ದಾರಿಯಲ್ಲಿ ಬೆಕ್ಕು ಅಡ್ಡ ಬಂದಿತ್ತು....

ಇಂತಿ,
ನಾಗೇಶ್..  :)

Monday, 21 April 2014

> ಮನದಲ್ಲಿ ನಗುವಿರಲಿ...


ನಗು ನಗು ನಗು...
ಮನಬಿಚ್ಚಿ ನೀ ನಗು...
ನಗುತಿರಲು ನೀನಾಗು
ಒಂದು ಪುಟ್ಟ ಮಗು...
ನಗುನಗುತಲಿ ನೀ ಸಾಗು
ಯಶಸ್ವಿಯು ನೀನಾಗು ...

ವಿಶ್ವಾಸದಿ ನಗುತಿರಲು
ನಿನಗಾಗದು ಸೋಲು....
ಜೀವನದಲಿ ನಗುವಿರಲಿ
ಅದಕೊಂದು ಮಿತಿಯಿರಲಿ
ಅತಿಯಾಗಿ ನಗದಿರು
    ನಿನಗೆ ಹುಚ್ಚೆನ್ನುವರು.....

ಬದುಕಿಡೀ ಇರಲಿ ಸಂತಸ
ಸದಾ ತುಟಿಯ ಮೇಲಿರಲೊಂದು ಮಂದಹಾಸ..

ಮನದಲ್ಲಿ ನಗುವಿರಲಿ....

ಇಂತಿ,
ನಾಗೇಶ್ ...

Sunday, 13 April 2014

> ಗುಂಡನ ಪೌರುಷ

ಹುಣ್ಣಿಮೆಯ ರಾತ್ರಿ ಗುಂಡ
ಬಂದೂಕು ಹಿಡಿದು ಬಾಗಿಲಲ್ಲಿ ನಿಂತುಕೊಂಡ

ಅರ್ಥವಾಗಲಿಲ್ಲ ಅವನ ಹೆಂಡತಿಗೆ
ಇದು ಯಾಕೆಂದು ಹೀಗೆ
ಕೇಳಿದಳು ಗಂಡನಿಗೆ
ಹೊರಟಿರುವಿರಿ ಎಲ್ಲಿಗೆ
ಗುಂಡ ಹೇಳಿದ ಉತ್ತರಿಸುತ್ತ ಪತ್ನಿಗೆ
ಹೊರಟಿರುವೆನು ಹುಲಿ ಬೇಟೆಗೆ

ಇನ್ಯಾಕೆ ಬಾಗಿಲಲ್ಲಿ ನಿಂತಿರುವುದು?
ಎಂದು ಕೇಳಿದಳು ಹೆಂಡತಿ..
ಹೊರಗಡೆ ನಾಯಿಯೊಂದು ನಿಂತಿರುವುದು
ಭಯವಾಗ್ತಿದೆ ಮಾರಾಯ್ತಿ.....  :D

ಇಂತಿ,
ನಾಗೇಶ್ :) ...

Sunday, 6 April 2014

> ಸ್ವಾರ್ಥಿ ಸಮಾಜ ...


ಮೂಲ ರಾಗ : ಪಾಪ ಪುಣ್ಯ.. ಲೆಕ್ಕ ಹಾಕಿ ಬದುಕೋಕಾಯ್ತದ ?
ಚಿತ್ರ : ದ್ಯಾವ್ರೇ..


ಭೂಮಿಯೊಂದು ತಿರುಗೋ ಬುಗುರಿ .. ನಿಲ್ಸೋಕಾಯ್ತದ??
ಬಾಳೇ ಒಂದು ಚಲಿಸೋ ಗಾಡಿ .. ನಿಲ್ದೇ ಇರ್ತದ??
ಹುಟ್ಟು.. ಆದ ಮೇಲೆ...   ಶುರುವಾಯ್ತು ಬಾಳ ದಾರಿ...
ಕೊನೆಗೆ.. ಸತ್ತ ಮೇಲೆ... ಕಟ್ತಾರೆ ನಿಂಗೆ ಗೋರಿ...
ಈ ಹುಟ್ಟು ಸಾವಿನ.. ಮಧ್ಯೆ ನಾಲ್ಕು ದಿನ .. ಬಾಳೋದೆ  ಜೀವನ...

ಭೂಮಿಯೊಂದು ತಿರುಗೋ ಬುಗುರಿ .. ನಿಲ್ಸೋಕಾಯ್ತದ??
ಬಾಳೇ ಒಂದು ಚಲಿಸೋ ಗಾಡಿ .. ನಿಲ್ದೇ ಇರ್ತದ??

ಕಾಸು ಇಲ್ಲದೇ ಕಷ್ಟ... ನಡ್ಸೋದು ಬಾಳು...
ಪ್ರತಿದಿನವೂ ಕಾಸಿಲ್ದೆ.. ತುಂಬಾ ಗೋಳು....
ಹಾಳು ದುಡ್ಡಿಗೆ.. ಸುಖವ ಪಡೆಯೋಕೆ.. ಏನೂ ಮಾಡ್ತಾರೆ ಜನರು....
ದುಡ್ದೊಂದೇ ಎಲ್ಲರ ಗುರಿ... ಹಿಡಿತಾರೆ ಬೇರೆ ದಾರಿ...
ದುಡ್ಡಿದ್ರೆ ಎಲ್ಲಾ ಇಲ್ಲಿ.. ಅದಕೊಂದು ಮಿತಿಯು ಇರಲಿ...
ಸಿರಿವಂತನಲ್ಲದೆಯೂ ಒಳ್ಳೆ ಬಾಳನು... ಬಾಳ್ಬೋದು  ಕೇಳಿರಿ....

ಭೂಮಿಯೊಂದು ತಿರುಗೋ ಬುಗುರಿ .. ನಿಲ್ಸೋಕಾಯ್ತದ??
ಬಾಳೇ ಒಂದು ಚಲಿಸೋ ಗಾಡಿ .. ನಿಲ್ದೇ ಇರ್ತದ??

ಹೇಳಿ ಕೇಳಿ ಇದು ಕಲಿಗಾಲ... ಎಲ್ಲಿದೆ ನ್ಯಾಯ...
ಸುಮ್ನೆ ಏತಕೆ ಕುಂತಿರುವೆ?.. ದೇವ್ರೇ  ಸರಿಯಾ??
ಮೋಸವ ಮಾಡಿ... ಅಧಿಕಾರದಿಂದ... ಊರೆಲ್ಲಾ  ಕೊಳ್ಳೆ  ಹೊಡೆದು...
ಇನ್ಯಾಕೆ ಆಸ್ತಿ ಪಾಸ್ತಿ.. ಇದೆಯಲ್ಲಾ ತುಂಬಾ ಜಾಸ್ತಿ...
ನೀವ್ ಹೀಗೇ ಮಾಡಿದಲ್ಲಿ.. ಜನಕೆಲ್ಲಾ ನ್ಯಾಯವೆಲ್ಲಿ??
ನೀವೇನೇ ಮಾಡಿದರೂ... ಎಷ್ಟೇ ನುಂಗಿದರೂ... ಜನರು ಕೇಳ್ತಾರಾ???

ಭೂಮಿಯೊಂದು ತಿರುಗೋ ಬುಗುರಿ .. ನಿಲ್ಸೋಕಾಯ್ತದ??
ಬಾಳೇ ಒಂದು ಚಲಿಸೋ ಗಾಡಿ .. ನಿಲ್ದೇ ಇರ್ತದ??
ಹುಟ್ಟು.. ಆದ ಮೇಲೆ...   ಶುರುವಾಯ್ತು ಬಾಳ ದಾರಿ...
ಕೊನೆಗೆ.. ಸತ್ತ ಮೇಲೆ... ಕಟ್ತಾರೆ ನಿಂಗೆ ಗೋರಿ...
ಈ ಹುಟ್ಟು ಸಾವಿನ.. ಮಧ್ಯೆ ನಾಲ್ಕು ದಿನ .. ಬಾಳೋದೆ  ಜೀವನ...

ಇಂತಿ,
ನಾಗೇಶ್ :) ...

Tuesday, 1 April 2014

> ಹಿತನುಡಿ - 2


ಕಾಡಿನೊಡಲಲ್ಲಿ ಇರುವ ಜೀವಿಗಳ ನೋಡು..
ಪ್ರತಿದಿನವೂ ಕಷ್ಟಪಡುವುದು ಅವುಗಳ ಪಾಡು..
ದಿನದಿನವೂ ದುಡಿದು ಬೇಟೆಯಾಡಿದರೆ ಬಾಳು..
ಎಲ್ಲ ಮೂಕಜೀವಿಗಳದು ಇದೆ ಗೋಳು..

ನಿನ್ನ ಜೀವನ ಕಷ್ಟವೆಂದು ಹೆದರಿ ಓಡುವೆ ಏಕೆ?
ದಿನನಿತ್ಯ ಕಷ್ಟಪಡುವ ಆ ಪ್ರಾಣಿಗಳ ಪಾಡು ಬೇಕೆ??
ಗೊತ್ತಿಲ್ಲ ಗುರಿಯಿಲ್ಲ... ಮರ-ಗಿಡಗಳೇ ಎಲ್ಲ..
ವಂಚಿಸುವ ಬುದ್ಧಿ ಆ ಪ್ರಾಣಿಗಳಲಿಲ್ಲ...

ನಿನ್ನ ಕಷ್ಟವ ಅವುಗಳ ಕಷ್ಟಕ್ಕೆ ಹೋಲಿಸು...
ಅದಕಿಂತ ನಿನ್ನ ಕಷ್ಟವೇ ಎಷ್ಟೋ ಲೇಸು..
ಎದುರಾದ ಕಷ್ಟವ ಧೈರ್ಯದಿ ಎದುರಿಸು..
ಆತ್ಮವಿಶ್ವಾಸವಿರಲು ಜೀವನ ಸಲೀಸು..

ಸಮಸ್ಯೆಯ ಬಗೆಹರಿಸಲು ಸಾಧ್ಯವೇ ಇಲ್ಲವೆನಲು..
ಅದ ಕುರಿತು ಚಿಂತಿಸಿ ಫಲವೇನು...
ಎದುರಾದ ಸಮಸ್ಯೆಗೆ ಪರಿಹಾರ ಇರಲು.
ಅದರ ಬಗ್ಗೆ ಚಿಂತಿಸಬೇಕೇನು??

ಬಾಳೆಂಬುದು ಏರಿಳಿತದ ದಾರಿ..
ಎಂದಿಗೂ ಕೈಬಿಡಬೇಡ ಬಾಳ ಗುರಿ..
ಬರಬಹುದು ಕಷ್ಟಗಳು ನೂರಾರು..

ಎಲ್ಲವ ಎದುರಿಸಿ ಮುಂದೆ ನುಗ್ಗುತಿರು...

ಇಂತಿ,
ನಾಗೇಶ್ :)