Monday 23 June 2014

> ಮನದಾಸೆ...


ಜಗವೊಂದು ಚೆಂಡು....
ಆಗಿಹುದು ಗುಂಡು...
ಅದ ಮಾಡಿ ತುಂಡು ತುಂಡು...
ಎಲ್ಲರೂ ಹೇಳುವರು ತಮ್ಮದೆಂದು....

ಅದ ಮಾರುವರು ಹಣವ ಕೊಂಡು..
ಇನ್ಯಾರೋ ಅದನ್ನು ತೆಗೆದುಕೊಂಡು...
ಮನೆಯೊಂದ ಕಟ್ಟಬೇಕೆಂದುಕೊಂಡು...
ಮೈತುಂಬಾ ಸಾಲವ ಮಾಡಿಕೊಂಡು...
ಆ ಸಾಲದಿಂದ ಮನೆಯ ಕಟ್ಟಿಕೊಂಡು...
ಸಾಲದಿಂದಾಗಿ ನೆಮ್ಮದಿ ಕಳೆದುಕೊಂಡು...
ಬರಡಾಗುವುದೀ ಹಾಳು ಜೀವನ...
ಮನದ ಆಸೆಯೇ ಇದಕೆಲ್ಲ ಕಾರಣ....


ಬುದ್ಧನೆಂದಿಹನು ... ಆಸೆಯೇ ದುಃಖಕ್ಕೆ ಮೂಲ....
ಹಾಗೆಂದು ಆಸೆಪಡಲೇಬಾರದಂತಲ್ಲ.....
ಕಾಲು ಚಾಚು ನೀ ಹಾಸಿಗೆಯಿದ್ದಷ್ಟು...
ಅದರಲ್ಲೇ ತೃಪ್ತಿಪಡು ಸಾಗರದ ನೀರಷ್ಟು...


ಇಂತಿ,
ನಾಗೇಶ್ ... :)

Monday 16 June 2014

> ಆಸೆ....

ಆಸೆ ಆಸೆ ಆಸೆ....
ಆಸೆ ತರುವುದು ನಿರಾಸೆ...
ಈಗಿರುವ ಚಿಕ್ಕ ಆಸೆ...
ಮುಂದಾಗಬಹುದು ದುರಾಸೆ...
ಕಾಲವಿದು ಕಲಿಗಾಲ...
ಗೆಲ್ಲುವುದು ಸುಲಭವಲ್ಲ...

ದುರಾಸೆಗೆ ಕಾರಣವೇನು...??
ಆ ಭಗವಂತನೇ ಹೇಳಿರುವನು...
ಅದು ಹೆಣ್ಣು, ಹೊನ್ನು, ಮಣ್ಣು....
ಅದೆಂದೂ ಬದಲಾಗದಿನ್ನು...
ರಾಮಾಯಣಕೆ ಕಾರಣ ಹೆಣ್ಣು..
ಕುರುಕ್ಷೇತ್ರಕ್ಕೆ ಕಾರಣ ಮಣ್ಣು...

ಒಂಥರಾ ಹುಳಿಹಣ್ಣು...
ಈ ಹೆಣ್ಣು, ಹೊನ್ನು, ಮಣ್ಣು...
ಹೆಚ್ಚು ಪಡೆಯಲು ಹೋಗಿ ಈ ಮೂರನ್ನು...
ವ್ಯರ್ಥ ಮಾಡಬೇಡಿ ನಿಮ್ಮ ಸಮಯವನ್ನು

ಇದಕೆ ಅತಿಯಾಸೆ ಪಟ್ಟವರು...
ಇಂದು ಜೈಲಿಗೆ ಹೋಗಿಹರು...
ದುಡಿದರೆ ಹರಿಸಿ ಬೆವರು...
ಜೀವನದಲ್ಲಿ ಉನ್ನತಿ ಪಡೆಯುವರು...


ಇಂತಿ,
ನಾಗೇಶ್ ... :)

Thursday 5 June 2014

> ವನಮಹೋತ್ಸವ ....


ಇಂದಿನ ದಿನಾಂಕ ಜೂನ್ ಐದು..
ವನಮಹೋತ್ಸವದ ದಿನವಿಂದು..
ಅವರವರ ಕೆಲಸದಲ್ಲಿ ಬ್ಯುಸಿ ಎಲ್ಲರೂ...
ವನಮಹೊತ್ಸವವ ಆಚರಿಸುವವರಾರು??

ಮಾಡುವರು ಭಾಷಣವ.. ಮರಗಳ ಕಾಪಾಡಿರೆಂದು...
ಅದ ಹೇಳುವವರು ಎಲ್ಲಿಹರೋ ಇಂದು...
ಭಾಷಣದಿ ಹೇಳಲದು ಬಲು ಸುಲಭ....
ಗಿಡವ ನೆಟ್ಟರೆ ಅವರಿಗೆಲ್ಲಿದೆ ಲಾಭ???

ಸ್ವಾರ್ಥವಿಲ್ಲದೆ ಏನೂ ಮಾಡದ ಮಾನವ...
ಅದೇ ಸ್ವಾರ್ಥಕ್ಕಾಗಿ ಕಡಿಯುವನು ಮರವ..
ಪಟ್ಟಣದಿ ಹಚ್ಚ ಹಸಿರಾದ ಮರಗಳೇ ಇಲ್ಲ..
ಎಲ್ಲೆಲ್ಲೂ ಕಾಂಕ್ರೀಟಿನ ಕಾಡೇ ಬೆಳೆದಿಹುದಲ್ಲ..

ಮಾನವನ ಅತಿಯಾಸೆಗೆ ಮಿತಿಯಿಲ್ಲ...
ಹೀಗೆಯೇ ಮುಂದುವರೆದರೆ ಉಳಿಗಾಲವಿಲ್ಲ...
ತನ್ನ ಧನದಾಹಕ್ಕೆ ಉರುಳಿಸುವ ಮರವ...
ತಪ್ಪಿಸುತಿಹನು ಪ್ರಕೃತಿಯ ಸಮತೋಲನವ..

ಸಾಲದು ಕೇವಲ ಇಂದು ಗಿಡವ ನೆಟ್ಟರೆ...
ಪ್ರತಿದಿನವೂ ನೀರೆರೆದು ಪೋಷಿಸಿದರೆ...
ಪುನಃ ಹಸಿರು ಸೀರೆಯ ಉಡುವಳು ಭೂಮಾತೆ..
ಸಕಲ ಜೀವ ಸಂಕುಲಕೆ ಅನ್ನದಾತೆ...


ನಮ್ಮೂರ ಮರ-ಗಿಡಗಳ ಉಳಿಸೋಣ....
ನಮ್ಮ ಕರ್ತವ್ಯ ನಾವು ಮಾಡೋಣ...
ಪ್ರತಿಯೊಬ್ಬರೂ ಈ ಧೃಡ ಸಂಕಲ್ಪ ತೊಡಲು....

ಧರಣಿ ಕಂಗೊಳಿಸುವುದು ಹಚ್ಚ ಹಸಿರಿನೊಳು...

ಇಂತಿ,
ನಾಗೇಶ್ ... :)

Sunday 1 June 2014

> ಯೌವ್ವನದ ಎಡವಟ್ಟು....


ಟೀನೇಜಲಿ ಇರುವಾಗಲೇ
ಶುರುವಾಗುವುದು ಆಕರ್ಷಣೆಯ ಅಲೆ ....
ಇದನ್ನೆಂದುಕೊಳ್ಳುವರು ಪ್ರೀತಿಯ ಬಲೆ....
ಆದರೆ ಇದೊಂಥರ ವಿಚಿತ್ರ ಖಾಯಿಲೆ ....

ಹೇಳದೆ ಕೇಳದೆ ಹುಟ್ಟುವುದು ಪ್ರೀತಿ...
ಅದಕಿರಬೇಕೊಂದು ರೀತಿ ನೀತಿ....
ಪ್ರೀತಿಯಲಿ ಬಿದ್ದವರಿಗೆ ಪ್ರೀತಿಯೇ ಜಗತ್ತು....
ಇರಬೇಕು ಆ ಪ್ರೀತಿಯಲಿ ಯಾವತ್ತೂ....
ಪರಿಶುದ್ಧ ನಂಬಿಕೆಯ ನಿಯತ್ತು....
ತಪ್ಪಿದರೆ ಇಬ್ಬರಿಗೂ ಆಪತ್ತು .....

ಕೆಲ ಪ್ರೀತಿಯಲಿ ಕೈ ಕೊಡುವರು ಹುಡುಗಿಯರು...
ಇನ್ನು ಕೆಲವು ಸಲ ಹುಡುಗರು....
ಕೈ ಕೊಟ್ಟಾಗ ಹುಡುಗರು....
ಹುಡುಗಿಯರು ಬೇರೆ ಮದುವೆಯಾಗುವರು....
ಕೈ ಕೊಟ್ಟಾಗ ಹುಡುಗಿಯರು.....
ಹುಡುಗರು ಹುಡುಕುವರು ಬಾರು.....

ಕೈಯಲ್ಲಿ ಹಿಡಿಯುವರು ಬೀರು....

ಇಂತಿ,
ನಾಗೇಶ್ ... :)