Tuesday 1 April 2014

> ಹಿತನುಡಿ - 2


ಕಾಡಿನೊಡಲಲ್ಲಿ ಇರುವ ಜೀವಿಗಳ ನೋಡು..
ಪ್ರತಿದಿನವೂ ಕಷ್ಟಪಡುವುದು ಅವುಗಳ ಪಾಡು..
ದಿನದಿನವೂ ದುಡಿದು ಬೇಟೆಯಾಡಿದರೆ ಬಾಳು..
ಎಲ್ಲ ಮೂಕಜೀವಿಗಳದು ಇದೆ ಗೋಳು..

ನಿನ್ನ ಜೀವನ ಕಷ್ಟವೆಂದು ಹೆದರಿ ಓಡುವೆ ಏಕೆ?
ದಿನನಿತ್ಯ ಕಷ್ಟಪಡುವ ಆ ಪ್ರಾಣಿಗಳ ಪಾಡು ಬೇಕೆ??
ಗೊತ್ತಿಲ್ಲ ಗುರಿಯಿಲ್ಲ... ಮರ-ಗಿಡಗಳೇ ಎಲ್ಲ..
ವಂಚಿಸುವ ಬುದ್ಧಿ ಆ ಪ್ರಾಣಿಗಳಲಿಲ್ಲ...

ನಿನ್ನ ಕಷ್ಟವ ಅವುಗಳ ಕಷ್ಟಕ್ಕೆ ಹೋಲಿಸು...
ಅದಕಿಂತ ನಿನ್ನ ಕಷ್ಟವೇ ಎಷ್ಟೋ ಲೇಸು..
ಎದುರಾದ ಕಷ್ಟವ ಧೈರ್ಯದಿ ಎದುರಿಸು..
ಆತ್ಮವಿಶ್ವಾಸವಿರಲು ಜೀವನ ಸಲೀಸು..

ಸಮಸ್ಯೆಯ ಬಗೆಹರಿಸಲು ಸಾಧ್ಯವೇ ಇಲ್ಲವೆನಲು..
ಅದ ಕುರಿತು ಚಿಂತಿಸಿ ಫಲವೇನು...
ಎದುರಾದ ಸಮಸ್ಯೆಗೆ ಪರಿಹಾರ ಇರಲು.
ಅದರ ಬಗ್ಗೆ ಚಿಂತಿಸಬೇಕೇನು??

ಬಾಳೆಂಬುದು ಏರಿಳಿತದ ದಾರಿ..
ಎಂದಿಗೂ ಕೈಬಿಡಬೇಡ ಬಾಳ ಗುರಿ..
ಬರಬಹುದು ಕಷ್ಟಗಳು ನೂರಾರು..

ಎಲ್ಲವ ಎದುರಿಸಿ ಮುಂದೆ ನುಗ್ಗುತಿರು...

ಇಂತಿ,
ನಾಗೇಶ್ :)

No comments:

Post a Comment