Monday 26 May 2014

> ಊರ್ವಶಿಯ ಅವಾಂತರ ...

ಪೇಟೆಯ ಮಧ್ಯದಿ
ಇತ್ತೊಂದು ಬಟ್ಟೆಯಂಗಡಿ
ಸೆಳೆಯಲು ಗ್ರಾಹಕರ ಗಮನವನ್ನು
ಹಾಕಿದ್ದರು ಫಲಕವೊಂದನ್ನು

ಹೀಗೆ ಬರೆಯಲಾಗಿತ್ತು ಫಲಕದಲ್ಲಿ
ಈ ಬಟ್ಟೆಯಂಗಡಿಯಲ್ಲಿ
೧೦೦೦ ರೂ ಗೆ ಏನೇ ಕೊಂಡುಕೊಳ್ಳಿ
ಉಚಿತವಾಗಿ ೧ ಸೀರೆ ಪಡೆದುಕೊಳ್ಳಿ

ಇದ ನೋಡಿದ ಊರ್ವಶಿ
ಅಂಗಡಿಗೆ ಬಂದಳು ಧಾವಿಸಿ
ಸ್ವಲ್ಪ ಹೊತ್ತಲ್ಲಿ ಅಲ್ಲೋಲ ಕಲ್ಲೋಲ
ಏಕೆಂದರೆ ಅಲ್ಲಿ ನಡೆಯುತ್ತಿತ್ತೊಂದು ಜಗಳ
ಕಾರಣ?
ಆಕೆ ತೆಗೆದುಕೊಂಡಿದ್ದಾಳೆ ೧೦೦೦ ರೂ ಚಿಲ್ಲರೆ

ಅವಳಿಗೂ ಬೇಕಂತೆ ಆ ಉಚಿತ ಸೀರೆ .....

ಇಂತಿ,
ನಾಗೇಶ್ ... :)

Monday 19 May 2014

> ಮುಂಜಾನೆಯ ಕವನ 1

ಎಂದಿನಂತೆ ಮುಗಿಯುತ್ತಾ ಇರುಳು
ಮತ್ತೆ ಶುರುವಾಗುವುದು ಹಗಲು..

ಮುಂಜಾನೆಯ ಸೂರ್ಯ ಮೇಲೇಳಲು
ತಿಳಿಯಾಗಿರುವುದು ಆ ಮುಗಿಲು
ಚಿಲಿಪಿಲಿಗುಟ್ಟುವ ಹಕ್ಕಿಗಳು
ಅದೆಷ್ಟು ಇಂಪು ಕೇಳಲು...

ಮಳೆಗಾಲದಲ್ಲಿ ಗುಡುಗು ಬರಲು
ಮಳೆ ಬರುವ ಸೂಚನೆ ಸಿಗಲು
ಮಳೆ ಧರೆಗಿಳಿಯುವುದನೆ ಕಾಯುತಿರಲು
ಸಂತಸದಿ ಗರಿ ಬಿಚ್ಚುವ ನವಿಲು...
 

ಸೂರ್ಯನ ಕಿರಣಗಳು
ಬೀಳುತಿರುವ ಮಳೆಹನಿಯ ಮೇಲೆ ಬೀಳಲು
ಮೂಡುವುದು ಕಾಮನಬಿಲ್ಲು
ಅದರಲ್ಲಿರುವ ಬಣ್ಣಗಳು ಏಳು
ಎಲ್ಲವೂ ಬಿಲ್ಲಿನಂತೆ ಬಾಗಿರುವುದು ನೋಡು
ಆಕರ್ಷಕ ಚಿತ್ತಾರ ಮೂಡುವುದು ಬಾನಿನೊಳು...

ಇದ ನೋಡುತ್ತಾ ಮನವು ಖುಷಿಪಡಲು
ಕೆನ್ನೆಯ ಮೇಲೊಂದು ಮಳೆಹನಿ ಬೀಳಲು
ರಪ್ಪನೆ ಮುಚ್ಚುವುದೀ ಕಂಗಳು

ಸಣ್ಣಗೆ ಮುಗುಳ್ನಗುವ ತುಟಿಗಳು....

ಇಂತಿ,
ನಾಗೇಶ್ ...

Monday 5 May 2014

> ಗೆಳೆತನದ ದೋಣಿ...

ಯಾರದೋ ಮೇಲಿನ ಮುನಿಸು
ಏಕಾಂತ ಬಯಸುತಿದೆ ಮನಸು 

ಶಾಂತಸಾಗರದಿ ಸಾಗುವ ಹಡಗಂತಿತ್ತು ಗೆಳೆತನ
ಈಗ ಸುನಾಮಿಗೆ ಸಿಕ್ಕ ದೋಣಿಯಂತಾಗಿದೆ ಜೀವನ
ಮನದ ಸಾಗರದಿ ಎದ್ದಿದೆ ಭಿನ್ನಾಭಿಪ್ರಾಯದ ಸುನಾಮಿ
ಎಲ್ಲವ ಮನದಲ್ಲೇ ಇಟ್ಟುಕೊಂಡರೆ ವಿರಸವಾಗದು ಕಮ್ಮಿ

ಸಮಾಧಾನದಿಂದ ಕುಳಿತು ಮಾತನಾಡಿ
ಮನದಲ್ಲಿರುವುದೆಲ್ಲವ ಹೊರಗೆ ದೂಡಿ
ಹರಿಯಲಿ ಬೇಕಾದರೆ ಕಣ್ಣೀರ ಕೋಡಿ
ಆಮೇಲೆ ನೋಡಿ
ಮೊದಲಿನಂತಾಗುವುದು ಗೆಳೆತನದ ಜೋಡಿ

ಇದೇ ಗೆಳೆತನದಲ್ಲಿರೋ ಮೋಡಿ ......

ಇಂತಿ,
ನಾಗೇಶ್ ...  :)