Monday 19 May 2014

> ಮುಂಜಾನೆಯ ಕವನ 1

ಎಂದಿನಂತೆ ಮುಗಿಯುತ್ತಾ ಇರುಳು
ಮತ್ತೆ ಶುರುವಾಗುವುದು ಹಗಲು..

ಮುಂಜಾನೆಯ ಸೂರ್ಯ ಮೇಲೇಳಲು
ತಿಳಿಯಾಗಿರುವುದು ಆ ಮುಗಿಲು
ಚಿಲಿಪಿಲಿಗುಟ್ಟುವ ಹಕ್ಕಿಗಳು
ಅದೆಷ್ಟು ಇಂಪು ಕೇಳಲು...

ಮಳೆಗಾಲದಲ್ಲಿ ಗುಡುಗು ಬರಲು
ಮಳೆ ಬರುವ ಸೂಚನೆ ಸಿಗಲು
ಮಳೆ ಧರೆಗಿಳಿಯುವುದನೆ ಕಾಯುತಿರಲು
ಸಂತಸದಿ ಗರಿ ಬಿಚ್ಚುವ ನವಿಲು...
 

ಸೂರ್ಯನ ಕಿರಣಗಳು
ಬೀಳುತಿರುವ ಮಳೆಹನಿಯ ಮೇಲೆ ಬೀಳಲು
ಮೂಡುವುದು ಕಾಮನಬಿಲ್ಲು
ಅದರಲ್ಲಿರುವ ಬಣ್ಣಗಳು ಏಳು
ಎಲ್ಲವೂ ಬಿಲ್ಲಿನಂತೆ ಬಾಗಿರುವುದು ನೋಡು
ಆಕರ್ಷಕ ಚಿತ್ತಾರ ಮೂಡುವುದು ಬಾನಿನೊಳು...

ಇದ ನೋಡುತ್ತಾ ಮನವು ಖುಷಿಪಡಲು
ಕೆನ್ನೆಯ ಮೇಲೊಂದು ಮಳೆಹನಿ ಬೀಳಲು
ರಪ್ಪನೆ ಮುಚ್ಚುವುದೀ ಕಂಗಳು

ಸಣ್ಣಗೆ ಮುಗುಳ್ನಗುವ ತುಟಿಗಳು....

ಇಂತಿ,
ನಾಗೇಶ್ ...

No comments:

Post a Comment