ಈ ಬೃಹತ್
ಜಗದಲ್ಲಿ ಹುಲುಕಡ್ಡಿ ಈ
ಮಾನವ...
ಪ್ರಗತಿಯ
ಭರದಲ್ಲಿ ಅವನತಿಯತ್ತ
ಸಾಗುತಿರುವ...
ಕೆಲ ವರ್ಷಗಳ
ಹಿಂದೆ.. ಮಾನವನಿಗಿತ್ತು
ಏನೇನೋ ಕಲ್ಪನೆ
ಆದರೆ ಇಂದು ಇದೆ.. ಎಲ್ಲ ಕಣ್ಣ
ಮುಂದೆನೇ
ಅತಿಯಾಯ್ತು ಈ
ಮಾನವನ...
ಮುಂದುವರಿದ
ತಂತ್ರಜ್ಞಾನ...
ಮುಂದುವರಿಯುತ್ತಾ
ಕಳೆದುಕೊಳ್ಳುತ್ತಿದ್ದಾನೆ
ತನ್ನದೇ ಸ್ವಂತಿಕೆಯನ್ನ..
ಮಾನವ
ಪೂರೈಸಿಕೊಳ್ಳಲು ತನ್ನ ಆಸೆಯನ್ನು
ಕಡಿಯುತ್ತಾ ಬಂದ
ಸುಂದರ ಕಾಡನ್ನು
ಹೀಗೆಯೇ
ಮುಂದುವರಿದರೆ..
ನಾಶವಾಗುವುದು
ಜೀವ ಸಂಕುಲ
ಪ್ರಕೃತಿ
ಸಮತೋಲನ ತಪ್ಪಿದರೆ
ಉಂಟಾಗುವುದು
ಅಲ್ಲೋಲ ಕಲ್ಲೋಲ
ಬೆಳೆಯುತ್ತಿದ್ದಾನೆ
ಯಂತ್ರ ಮಾನವ
ಹುಟ್ಟು
ಹಾಕಿರುವುದು ಈ ಹುಲು ಮಾನವ
ಅದಕೆ ಬೇಕಾದ
ಶಕ್ತಿಯನ್ನೆಲ್ಲ ಕೊಡುವ
ತನ್ನ
ಅಂತ್ಯಕ್ಕೆ ಮುಹೂರ್ತ ಮಾಡಿರುವ
ಈ ಆಧುನಿಕ
ಲೋಕದಲ್ಲಿ
ಬದಲಾಗಿದೆ ಜೀವನ
ಶೈಲಿ
ಪ್ರಕೃತಿಯನ್ನು
ಎದುರು ಹಾಕಿಕೊಂಡಲ್ಲಿ
ಮಾನವನಿಗಿಲ್ಲ
ಉಳಿಗಾಲವಿಲ್ಲಿ
ಪ್ರಯತ್ನ
ಪಡುತಿರುವನು ಸಾವನ್ನು ಗೆಲ್ಲಲು
ಆದರದು
ಸಾಧ್ಯವಾಗದು ಯಾರಿಂದಲೂ
ಹೀಗೆ
ಮುಂದುವರಿದರೆ ತಂತ್ರಜ್ಞಾನ.. ಒಂದಲ್ಲ ಒಂದು
ದಿನ..
ಕಾಣಬಹುದು
ಮಾನವನ.. ದುರಂತ ಅವಸಾನ...
ಇಂತಿ,
ನಾಗೇಶ್ ... :)
No comments:
Post a Comment