Friday 7 March 2014

> ಹಿತನುಡಿ - 1



ಸಾಗರದಿ ಸಾಗುವ ಹಡಗಂತೆ ಈ ಜೀವನ
ಆಟ, ಓದಿನಲ್ಲೇ ಕಳೆಯುವುದು ಮುಕ್ಕಾಲು ಯೌವ್ವನ

ಈ ಹಂತದಲಿ ಬೇಕು ಜೀವನಕೆ ಯಶಸ್ಸು
ಅದಕೆ ಮಾಡಬೇಕು ಪರಿಶ್ರಮದ ತಪಸ್ಸು
ಇಲ್ಲಿ ಸಿಕ್ಕರೆ ಯಶಸ್ಸು
ಮುಂದಿನ ಜೀವನ ಸಲೀಸು


ಆಸೆಯೇ ದುಃಖಕ್ಕೆ ಮೂಲವೆಂದ ಬುದ್ಧ
ಈ ನಿಯಮಕೆ ಜೀವನಚಕ್ರ ಬದ್ಧ
ಜೀವನದಲ್ಲಿ ಇರಬಾರದು ಬಹು ನಿರೀಕ್ಷೆ
ಬಹುನಿರೀಕ್ಷೆ ತರಬಹುದು ನಿರಾಸೆ
ಇದಾಗಿರಬಹುದು ಭಗವಂತನ ಪರೀಕ್ಷೆ
ಅದರಲ್ಲಿ ಪಾಸಾಗುವುದು ಸಲೀಸೆ ??

ಯೌವ್ವನದಲ್ಲಿ ಮಾಡಬೇಡ ಮನಸ್ಸಿಗೆ ತೋಚಿದೆಲ್ಲವನ್ನು
ತಲೆಯಲ್ಲಿಟ್ಟುಕೋ ಮುಂದಿನ ಜೀವನವನ್ನು 
ಈಗ ಎಲ್ಲವನು ತೆಗೆದುಕೊಂಡರೆ ಹಗುರ
ಮುಂದೆ ಬದುಕಾಗುವುದು ಭಾರ

ಇರಬೇಕು ಗುರಿ ಮುಟ್ಟುವ ತವಕ
ಗುರಿ ಮುಟ್ಟುವ ತನಕ
ಈ ಹಡಗಿಗೆ ಭಗವಂತನೇ ನಾವಿಕ
ಅವನು ತೋರಿದ ಹಾದಿಯಲ್ಲಿ ನಡೆಯುವುದು ನಮ್ಮ ಕಾಯಕ

ಎದ್ದೇಳಬೇಕು ಯುವ ಪೀಳಿಗೆ 
ದೇಶದ ಮುಂದಿನ ನಾಳೆಗೆ
ಎಲ್ಲರೂ ಪಡೆಯಿರಿ ಜೀವನದಲ್ಲಿ ಏಳಿಗೆ
ಶುಭವಾಗಲಿ ಬಾಳಿಗೆ...

ಇಂತಿ,
ನಾಗೇಶ್ :)

No comments:

Post a Comment