Thursday 5 June 2014

> ವನಮಹೋತ್ಸವ ....


ಇಂದಿನ ದಿನಾಂಕ ಜೂನ್ ಐದು..
ವನಮಹೋತ್ಸವದ ದಿನವಿಂದು..
ಅವರವರ ಕೆಲಸದಲ್ಲಿ ಬ್ಯುಸಿ ಎಲ್ಲರೂ...
ವನಮಹೊತ್ಸವವ ಆಚರಿಸುವವರಾರು??

ಮಾಡುವರು ಭಾಷಣವ.. ಮರಗಳ ಕಾಪಾಡಿರೆಂದು...
ಅದ ಹೇಳುವವರು ಎಲ್ಲಿಹರೋ ಇಂದು...
ಭಾಷಣದಿ ಹೇಳಲದು ಬಲು ಸುಲಭ....
ಗಿಡವ ನೆಟ್ಟರೆ ಅವರಿಗೆಲ್ಲಿದೆ ಲಾಭ???

ಸ್ವಾರ್ಥವಿಲ್ಲದೆ ಏನೂ ಮಾಡದ ಮಾನವ...
ಅದೇ ಸ್ವಾರ್ಥಕ್ಕಾಗಿ ಕಡಿಯುವನು ಮರವ..
ಪಟ್ಟಣದಿ ಹಚ್ಚ ಹಸಿರಾದ ಮರಗಳೇ ಇಲ್ಲ..
ಎಲ್ಲೆಲ್ಲೂ ಕಾಂಕ್ರೀಟಿನ ಕಾಡೇ ಬೆಳೆದಿಹುದಲ್ಲ..

ಮಾನವನ ಅತಿಯಾಸೆಗೆ ಮಿತಿಯಿಲ್ಲ...
ಹೀಗೆಯೇ ಮುಂದುವರೆದರೆ ಉಳಿಗಾಲವಿಲ್ಲ...
ತನ್ನ ಧನದಾಹಕ್ಕೆ ಉರುಳಿಸುವ ಮರವ...
ತಪ್ಪಿಸುತಿಹನು ಪ್ರಕೃತಿಯ ಸಮತೋಲನವ..

ಸಾಲದು ಕೇವಲ ಇಂದು ಗಿಡವ ನೆಟ್ಟರೆ...
ಪ್ರತಿದಿನವೂ ನೀರೆರೆದು ಪೋಷಿಸಿದರೆ...
ಪುನಃ ಹಸಿರು ಸೀರೆಯ ಉಡುವಳು ಭೂಮಾತೆ..
ಸಕಲ ಜೀವ ಸಂಕುಲಕೆ ಅನ್ನದಾತೆ...


ನಮ್ಮೂರ ಮರ-ಗಿಡಗಳ ಉಳಿಸೋಣ....
ನಮ್ಮ ಕರ್ತವ್ಯ ನಾವು ಮಾಡೋಣ...
ಪ್ರತಿಯೊಬ್ಬರೂ ಈ ಧೃಡ ಸಂಕಲ್ಪ ತೊಡಲು....

ಧರಣಿ ಕಂಗೊಳಿಸುವುದು ಹಚ್ಚ ಹಸಿರಿನೊಳು...

ಇಂತಿ,
ನಾಗೇಶ್ ... :)

No comments:

Post a Comment